Tuesday, 22 May 2018

ಪೆಟ್ರೋಲ್, ಬೆಲೆ ಏರಿಸಿ ಮೋದಿ ಸರಕಾರ ಜನರನ್ನು ಲೂಟಿ ಮಾಡುತ್ತಿದೆ: ತೊಗಾಡಿಯಾ ಕಿಡಿ


ಮೇ 22:
ಬೆಂಗಳೂರು : ವಿಶ್ವ ಹಿಂದೂ ಪರಿಷತ್‌ ಮಾಜಿ ನಾಯಕ ಪ್ರವೀಣ್‌ ಭಾಯಿ ತೊಗಾಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದಿದೆ ಆದರೆ ಮೋದಿ ಸರಕಾರ ಮಾತ್ರ ದೇಶದಲ್ಲಿ ಪೆಟ್ರೋಲ್‌, ಡೀಸಿಲ್‌ ಮೇಲೆ ಅಧಿಕ ತೆರಿಗೆ ವಿಧಿಸಿ ಜನರನ್ನು ಲೂಟಿ ಮಾಡುತ್ತಿದೆ; ಇದನ್ನು ತಡೆಗಟ್ಟಲೇ ಬೇಕು ಎಂದು ಪ್ರವೀಣ್‌ ಭಾಯಿ ತೊಗಾಡಿಯಾ ಗುಡುಗಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ತೊಗಾಡಿಯಾ, ಸಂಕಷ್ಟದಲ್ಲಿರುವ ದೇಶದ ಕಬ್ಬು ಬೆಳೆಗಾರರಿಗೆ ಮೋದಿ ಸರಕಾರ ಸ್ಪಂದಿಸುತ್ತಿಲ್ಲ; ಆದರೆ ಪಾಕಿಸ್ಥಾನದ ರೈತರು ಸಂಕಷ್ಟದಲ್ಲಿದ್ದಾರೆಂದು ಅಲ್ಲಿಂದ ದೇಶಕ್ಕೆ ಸಕ್ಕರೆಯನ್ನು ಆಮದಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು


No comments:

Post a Comment

ದುರಂತದಿಂದ ಹಾನಿಗೊಳಗಾದ ದಕ್ಷಿಣ ಏಷ್ಯಾದ ಸಂಸ್ಥೆಗಳ ಮೇಲೆ COVID-19 ರ ಪರಿಣಾಮ: ವಿಶ್ವಬ್ಯಾಂಕ್ ವರ್ಕಿಂಗ್ ಪೇಪರ್

  COVID-19 ಕುರಿತು ಇತ್ತೀಚೆಗೆ ವಿಸ್ತರಿಸುತ್ತಿರುವ ಸಂಶೋಧನೆಯು ಸಾಂಕ್ರಾಮಿಕ ರೋಗವು ಆರ್ಥಿಕತೆಯ ಕೆಲವು ಗುಂಪುಗಳು ಮತ್ತು ಕ್ಷೇತ್ರಗಳ ಮೇಲೆ ಬೀರಿದ ಅಸಮಾನ ಪರಿಣಾಮವನ್ನ...