Saturday, 26 May 2018

ಸುಳ್ಳು ಪ್ರಚಾರದಲ್ಲಿ ತೊಡಗಿರುವ ಮಾಧ್ಯಮಗಳು, ನಿಫಾ ವೈರಸ್ ಗೆ ಬಾವಲಿಗಳು ಕಾರಣವಲ್ಲ, ಬೋಪಾಲದ ಪ್ರಯೋಗಾಲಯದಿಂದ ವರದಿ


ಕೆಲವಾರಗಳಿಂದ ಕೇರಳದಲ್ಲಿ ನಿಗೂಡ ವೈರಸ್ ನ ಕಾರಣದಿಂದ ಸುಮಾರು 12 ಮಂದಿ ಬಲಿಯಾಗಿದ್ದು, ಈ ಬಾವಲಿಗಳಿಂದ ಹರಡುತ್ತದೆ ಎಂದು ಕೇರಳದ ಮಾಧ್ಯಮಗಳು ಪ್ರಚಾರ ಮಾಡಿದ್ದವು, ಆದರೆ ಇದು ಬಾವಲಿಯಿಂದ ಹರಡುವ ವೈರಸ್ ಅಲ್ಲ ಎಂದು ಬೋಪಾಲದ ಪ್ರಯೋಗಾಲಯ ವರದಿ ನೀಡುವುದರೊಂದಿಗೆ ಇದರ ಹಿಂದಿನ ಕಾರಣ ಇನ್ನೂ ನಿಗೂಡವಾಗಿಯೇ ಉಳಿದಿದೆ.
ಭೋಪಾಲದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ ಪ್ರಯೋಗಾಲಯಕ್ಕೆ ಬಾವಲಿಗಳ ರಕ್ತ ಹಾಗೂ ಸೀರಂ ಸ್ಯಾಂಪಲ್ ಗಳನ್ನು ಕಳುಹಿಸಲಾಗಿದ್ದು, ಇದೀಗ ಪ್ರಯೋಗಾಲಯವು ತನ್ನ ವರದಿಯನ್ನು ನೀಡಿದೆ. ಈ ಸ್ಯಾಂಪಲ್ ಗಳ ಪರೀಕ್ಷೆಯಲ್ಲಿ ಯಾವುದೇ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಯೇಗಾಲಯ ಸ್ಪಷ್ಟಪಡಿಸಿದೆ.
ಆದರೆ ಪ್ರಯೋಗಾಲಯದ ವರದಿಗೆ ಪ್ರತಿಕ್ರಯಿಸಿದ ಆರೋಗ್ಯ ಅಧಿಕಾರಿಯೋರ್ವರು, ಪ್ರಯೋಗಾಲಯದ ವರದಿ ಕೇವಲ ಆರಂಭಿಕ ಪರೀಕ್ಷೆಗಳಿಂದ ಕಂಡುಕೊಳ್ಳಲಾಗಿದ್ದು, ಕಳುಹಿಸಲಾಗಿದ್ದ ಮಾದರಿಯಲ್ಲಿ ವೈರಸ್ ಗಳು ಇಲ್ಲದೇ ಇದ್ದಿರಬಹುದು. ಸಾಮಾನ್ಯವಾಗಿ ನಿಪಾಹ್ ವೈರಸ್ ಬಾವಲಿಗಳಲ್ಲಿಯೇ ಕಾಣಿಸುತ್ತವೆ ಎಂದು ಹೇಳಿದ್ದಾರೆ.
ಟಿವಿ ಮಾಧ್ಯಮಗಳು ಟಿಪಿಆರ್ ಗೋಸ್ಕರ ಸರಿಯಾದ ಮಾಹಿತಿ ಇಲ್ಲದೆ ಸುಳ್ಳು ಸುದ್ದಿಗಳನ್ನು ಪ್ರಚಾರಪಡಿಸುತ್ತಿರುವುದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದೆ.

No comments:

Post a Comment

ದುರಂತದಿಂದ ಹಾನಿಗೊಳಗಾದ ದಕ್ಷಿಣ ಏಷ್ಯಾದ ಸಂಸ್ಥೆಗಳ ಮೇಲೆ COVID-19 ರ ಪರಿಣಾಮ: ವಿಶ್ವಬ್ಯಾಂಕ್ ವರ್ಕಿಂಗ್ ಪೇಪರ್

  COVID-19 ಕುರಿತು ಇತ್ತೀಚೆಗೆ ವಿಸ್ತರಿಸುತ್ತಿರುವ ಸಂಶೋಧನೆಯು ಸಾಂಕ್ರಾಮಿಕ ರೋಗವು ಆರ್ಥಿಕತೆಯ ಕೆಲವು ಗುಂಪುಗಳು ಮತ್ತು ಕ್ಷೇತ್ರಗಳ ಮೇಲೆ ಬೀರಿದ ಅಸಮಾನ ಪರಿಣಾಮವನ್ನ...